ಯಂತ್ರ ಆರಂಭಿಸಿ

ವಿಂಗಡಣಾ ಟೇಬಲ್ · ಆರಂಭಿಕ ವಿಧಾನ

  1. ದಪ್ಪ ರಬ್ಬರ್ ಕೈಗವಸು ಧರಿಸಿ.ಏಪ್ರನ್ ಮತ್ತು ಮುಚ್ಚಿದ ಶೂ ಕೂಡ ಧರಿಸಿ.
  2. ಟೇಬಲ್ ಸ್ವಚ್ಛವಾಗಿದೆಯೇ ನೋಡಿ.ನಿನ್ನೆಯ ತ್ಯಾಜ್ಯ ಉಳಿದಿರಬಾರದು.
  3. ಬೇಡದ ವಸ್ತು ಹೋಗುವ ಚ್ಯೂಟ್ ಕೆಳಗೆ ಖಾಲಿ ಕ್ರೇಟ್ ನೇತುಹಾಕಿ.
  4. ಚೂಪಾದ ವಸ್ತುಗಳಿಗೆ ಒಂದು ಗಟ್ಟಿ ಡಬ್ಬಿ ಇಟ್ಟುಕೊಳ್ಳಿ.ಒಡೆದ ಗಾಜು, ಬ್ಲೇಡ್, ಸೂಜಿ ಅದರಲ್ಲೇ ಹಾಕಿ. ಮೆತ್ತನೆಯ ಚೀಲದಲ್ಲಿ ಎಂದಿಗೂ ಬೇಡ.
  5. ಟೇಬಲ್ ಗಟ್ಟಿಯಾಗಿ, ಸಮತಟ್ಟಾಗಿ ನಿಂತಿದೆಯೇ ನೋಡಿ.
  6. ನೆಲ ಒದ್ದೆಯಾಗಿದೆಯೇ? ಕೆಲಸ ಶುರು ಮಾಡುವ ಮೊದಲು ಒರೆಸಿ ಒಣಗಿಸಿ. ಒದ್ದೆ ನೆಲದಲ್ಲಿ ಜಾರಿ ಬೀಳಬಹುದು.

ಕಂಟ್ರೋಲ್ ಪ್ಯಾನೆಲ್ ತೆರೆಯಬೇಡಿ ಅಥವಾ ವೈರಿಂಗ್ ಮುಟ್ಟಬೇಡಿ. ವಿದ್ಯುತ್ ಆಘಾತವಾದರೆ ತಕ್ಷಣ ಮುಖ್ಯ MCB ಆಫ್ ಮಾಡಿ ನಮಗೆ ಕರೆ ಮಾಡಿ.