ದಿನನಿತ್ಯದ ಬಳಕೆ

ಕಾಂಪೋಸ್ಟರ್ · ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP)

1. ತ್ಯಾಜ್ಯವನ್ನು ಚೂರು ಮಾಡಿ

  1. ತ್ಯಾಜ್ಯವನ್ನು ವಿಂಗಡಿಸಿ.ಪ್ಲಾಸ್ಟಿಕ್, ಗಾಜು, ಲೋಹ ಮತ್ತು ಆಹಾರವಲ್ಲದ ಎಲ್ಲವನ್ನೂ ತೆಗೆಯಿರಿ.
  2. ಶ್ರೆಡರ್ ಆರಂಭಿಸಿ.ಹಿಂಭಾಗದ ಲಿವರ್ ಬಳಸಿ. ಸರಿಯಾದ ದಿಕ್ಕಿನಲ್ಲಿ ತಿರುಗುತ್ತಿದೆಯೇ ನೋಡಿ.
  3. ಹಾಪರ್‌ನ ಪಕ್ಕದಲ್ಲಿ ನಿಲ್ಲಿ.ಅದರ ನೇರ ಎದುರು ನಿಲ್ಲಬೇಡಿ.
  4. ಒಮ್ಮೆಗೆ ಗರಿಷ್ಠ 5 ಕೆ.ಜಿ. ಮಾತ್ರ, ಸ್ವಲ್ಪ-ಸ್ವಲ್ಪವಾಗಿ ಹಾಕಿ.ಮೇಲಿನ ಹಾಪರ್‌ಗೆ ಹಾಕಿ. ಇಡೀ ಟ್ರೇಯನ್ನು ಒಮ್ಮೆಲೇ ಸುರಿಯಬೇಡಿ.
  5. ಶ್ರೆಡರ್ ಚಲಿಸುವಾಗ ಕೈಗಳನ್ನು ಹಾಪರ್ ಒಳಗೆ ಹಾಕಬೇಡಿ.

  6. ಎಲ್ಲಾ ತ್ಯಾಜ್ಯ ಹಾಕಿ ಮುಗಿದ ಮೇಲೆ ಶ್ರೆಡರ್ ನಿಲ್ಲಿಸಿ.

2. ಶ್ರೆಡರ್ ತೊಳೆಯಿರಿ

  1. ಕ್ಲೀನಿಂಗ್ ಟ್ರೇ ಒಳಗೆ ತಳ್ಳಿ.ಹಿಂಭಾಗದ ಕ್ಲೀನಿಂಗ್ ಬಾಗಿಲಿನ ಮೂಲಕ.
  2. ಮೇಲಿನಿಂದ ನೀರು ಸುರಿಯಿರಿ.ನೀರು ಶ್ರೆಡರ್ ತೊಳೆದು ಟ್ರೇಗೆ ಬೀಳುತ್ತದೆ.
  3. ಟ್ರೇ ಹೊರತೆಗೆದು ನೀರನ್ನು ಚರಂಡಿಗೆ ಸುರಿಯಿರಿ.

3. ಕಾಂಪೋಸ್ಟಿಂಗ್ ಆರಂಭಿಸಿ

  1. ಸ್ವಲ್ಪ ನುಣ್ಣನೆಯ ಮರದ ಹೊಟ್ಟು (ಸಾ ಡಸ್ಟ್) ಹಾಕಿ.ಪರಿಶೀಲನಾ ಬಾಗಿಲಿನ ಮೂಲಕ. ಪ್ರತಿ 30 ಕೆ.ಜಿ. ಚೂರು ಮಾಡಿದ ತ್ಯಾಜ್ಯಕ್ಕೆ 1 ಕೆ.ಜಿ. ಮರದ ಹೊಟ್ಟು.
  2. ಎಲ್ಲಾ ಬಾಗಿಲುಗಳನ್ನು ಮುಚ್ಚಿ ಲಾಕ್ ಮಾಡಿ.
  3. ಸ್ಕ್ರೀನ್‌ನ ಎರಡನೇ ಪುಟಕ್ಕೆ ಹೋಗಿ.ಆರಂಭದ ಪುಟದಲ್ಲಿ ಹಸಿರು ಬಾಣವನ್ನು ಒತ್ತಿ ಹಿಡಿಯಿರಿ.
  4. Automatic mode ಅನ್ನು ಒತ್ತಿ ಹಿಡಿಯಿರಿ.ಟವರ್ ದೀಪ ಹಸಿರಾಗುತ್ತದೆ.
  5. ಕೆಳಗಿನ ಬಲಭಾಗದ ಬಾಣ ಒತ್ತಿ.ಈ ಪುಟದ ಎಲ್ಲಾ ದೀಪಗಳು ಹಸಿರಾಗಿವೆಯೇ ನೋಡಿ. ಯಾವುದಾದರೂ ಹಸಿರಾಗಿಲ್ಲವೇ? ನಮಗೆ ಕರೆ ಮಾಡಿ.
  6. ಯಂತ್ರ ಕೆಲಸ ಮಾಡಲು ಬಿಡಿ.ದಿನಕ್ಕೆ ಗರಿಷ್ಠ 20 ಗಂಟೆ ಚಲಿಸುತ್ತದೆ. ತಾನಾಗಿಯೇ ನಿಂತು ಮತ್ತೆ ಆರಂಭವಾಗುತ್ತದೆ.

4. ಗೊಬ್ಬರ ಹೊರತೆಗೆಯಿರಿ

  1. ಅಂಬರ್ (ಹಳದಿ) ದೀಪಕ್ಕಾಗಿ ಕಾಯಿರಿ.ಅಂಬರ್ ಎಂದರೆ ಗೊಬ್ಬರ ಸಿದ್ಧ.
  2. ಮುಂಭಾಗದ ಬಾಗಿಲು ತೆರೆಯಿರಿ.
  3. ಬಾಗಿಲಿನ ಮುಂದೆ ಒಂದು ಟ್ರೇ ಇಡಿ.
  4. Discharge mode ಅನ್ನು ಒತ್ತಿ ಹಿಡಿಯಿರಿ.ಸ್ಕ್ರೀನ್‌ನ ಎರಡನೇ ಪುಟದಲ್ಲಿದೆ. ಸುಮಾರು 90% ಗೊಬ್ಬರ ಹೊರಬರುತ್ತದೆ.
  5. ಗೊಬ್ಬರ ಹೊರಬರುವಾಗ ಕೈಗಳನ್ನು ಬಾಗಿಲಿನ ಒಳಗೆ ಹಾಕಬೇಡಿ.

  6. ಉಳಿದದ್ದನ್ನು ಒಳಗೇ ಬಿಡಿ.ಒಳಗೆ ಉಳಿಯುವ 10% ಮುಂದಿನ ಬ್ಯಾಚ್‌ಗೆ ಸಹಾಯ ಮಾಡುತ್ತದೆ.
  7. ಮುಂಭಾಗದ ಬಾಗಿಲಿನ ಒಳಭಾಗ ಸ್ವಚ್ಛಗೊಳಿಸಿ.ತಕ್ಷಣ ಮಾಡಿ, ಗೊಬ್ಬರ ಒಣಗಿ ಅಂಟಿಕೊಳ್ಳುವ ಮೊದಲು.
  8. ಮುಂಭಾಗದ ಬಾಗಿಲು ಮುಚ್ಚಿ ಲಾಕ್ ಮಾಡಿ.

ಶ್ರೆಡರ್ ಬಟನ್‌ಗಳು ಸ್ಕ್ರೀನ್‌ನಲ್ಲಿವೆಯೇ?

  1. ಸ್ಕ್ರೀನ್‌ನ ಮೂರನೇ ಪುಟಕ್ಕೆ ಹೋಗಿ.ಕೆಲವು ಯಂತ್ರಗಳಲ್ಲಿ ಶ್ರೆಡರ್ ಲಿವರ್‌ನಿಂದಲ್ಲ, ಇಲ್ಲಿಂದ ಚಲಿಸುತ್ತದೆ.
  2. ಕಾಂಪೋಸ್ಟಿಂಗ್ ನಡೆಯುತ್ತಿದೆಯೇ? ಮೊದಲು Pause composter ಒತ್ತಿ.
  3. ಶ್ರೆಡರ್ ಆರಂಭಿಸಲು ON ಒತ್ತಿ.ಸರಿಯಾದ ದಿಕ್ಕಿನಲ್ಲಿ ತಿರುಗುತ್ತಿದೆಯೇ ನೋಡಿ.
  4. ಮುಗಿದ ಮೇಲೆ OFF ಒತ್ತಿ.ಕಾಂಪೋಸ್ಟಿಂಗ್ ತಾನಾಗಿಯೇ ಮತ್ತೆ ಆರಂಭವಾಗುತ್ತದೆ.

ತಿಳಿದಿರಲಿ

  1. ನಾವು ಹೇಳದೆ ಸೆಟ್ಟಿಂಗ್‌ಗಳನ್ನು ಬದಲಿಸಬೇಡಿ.

  2. ಫೀಡಿಂಗ್ ಮಟ್ಟಕ್ಕಿಂತ ಹೆಚ್ಚು ತ್ಯಾಜ್ಯ ತುಂಬಬೇಡಿ. ಅದು ಮುಂಭಾಗದ ಬಾಗಿಲಿನಿಂದ ಚೆಲ್ಲುತ್ತದೆ.

  3. ಕಾಂಪೋಸ್ಟಿಂಗ್ ಕೋಣೆಗೆ ನೇರವಾಗಿ ನೀರು ಹಾಕಬೇಡಿ.

  4. ಯಂತ್ರ ಚಲಿಸುವಾಗ ಬಾಗಿಲುಗಳನ್ನು ಮುಚ್ಚಿಯೇ ಇಡಿ.

  5. ಯಂತ್ರ ಚಲಿಸುವಾಗ ಅದನ್ನು ಎಂದಿಗೂ ಸರಿಸಬೇಡಿ.

  6. ತುರ್ತು ಪರಿಸ್ಥಿತಿಯೇ? ಸ್ಕ್ರೀನ್‌ನಲ್ಲಿರುವ ಕೆಂಪು EMERGENCY ಬಟನ್ ಒತ್ತಿ.

ಟವರ್ ದೀಪದ ಅರ್ಥ

  • ಹಸಿರು: ಕಾಂಪೋಸ್ಟಿಂಗ್ ನಡೆಯುತ್ತಿದೆ.
  • ಕೆಂಪು: ಮುಂಭಾಗದ ಬಾಗಿಲು ತೆರೆದಿದೆ.
  • ಅಂಬರ್ (ಹಳದಿ): ಗೊಬ್ಬರ ಸಿದ್ಧವಾಗಿದೆ.

ಏನು ಹಾಕಬೇಕು

ಹಾಕಿ

  • ಎಲ್ಲಾ ಆಹಾರ ತ್ಯಾಜ್ಯಹಣ್ಣು, ತರಕಾರಿ, ಮಾಂಸ, ಕೋಳಿ, ಮೀನು, ಚಿಪ್ಪುಗಳು, ಮೂಳೆಗಳು, ಪಾಸ್ತಾ, ಬೇಕರಿ ಪದಾರ್ಥಗಳು, ಚೀಸ್ ಮತ್ತು ಮೊಟ್ಟೆ ಸಿಪ್ಪೆ.
  • ಆಹಾರ ಅಂಟಿದ ಕಾಗದನ್ಯಾಪ್ಕಿನ್, ಪೇಪರ್ ಟವೆಲ್, ಟೀ ಬ್ಯಾಗ್ ಮತ್ತು ಕಾಫಿ ಪುಡಿ.
  • ಸಸ್ಯಗಳುಹೂವುಗಳು, ಎಲೆಗಳು, ಹುಲ್ಲು ಮತ್ತು ಸಣ್ಣ ಕೊಂಬೆಗಳು.
  • ಪ್ರಮಾಣೀಕೃತ ಕಾಂಪೋಸ್ಟ್ ಆಗುವ ವಸ್ತುಗಳುಕಾಂಪೋಸ್ಟ್ ಆಗುವ ಚೀಲಗಳು (ASTM D6400), ಮರದ ಕಡ್ಡಿಗಳು ಮತ್ತು ಚಾಪ್‌ಸ್ಟಿಕ್‌ಗಳು.

ಹಾಕಬೇಡಿ

  • ದ್ರವಗಳು, ಗ್ರೀಸ್ ಮತ್ತು ಅಡುಗೆ ಎಣ್ಣೆ
  • ಪ್ಲಾಸ್ಟಿಕ್, ಥರ್ಮಾಕೋಲ್, ಪಾರ್ಸೆಲ್ ಡಬ್ಬಿಗಳು ಮತ್ತು ಬಳಸಿ ಎಸೆಯುವ ಕಪ್‌ಗಳು
  • ಗಾಜು ಮತ್ತು ಲೋಹ
  • ಮೇಣದ ಕಾಗದ ಮತ್ತು ಮೇಣ ಲೇಪಿತ ರಟ್ಟು
  • ರಬ್ಬರ್ ಬ್ಯಾಂಡ್, ತಂತಿ ಕಟ್ಟು ಮತ್ತು ಸ್ಟಿಕ್ಕರ್‌ಗಳು
  • ಡಯಾಪರ್‌ಗಳು
  • ಪ್ರಮಾಣೀಕೃತವಲ್ಲದ 'ಜೈವಿಕ ವಿಘಟನೀಯ' ವಸ್ತುಗಳು

ಕಂಟ್ರೋಲ್ ಪ್ಯಾನೆಲ್ ತೆರೆಯಬೇಡಿ ಅಥವಾ ವೈರಿಂಗ್ ಮುಟ್ಟಬೇಡಿ. ವಿದ್ಯುತ್ ಆಘಾತವಾದರೆ ತಕ್ಷಣ ಮುಖ್ಯ MCB ಆಫ್ ಮಾಡಿ ನಮಗೆ ಕರೆ ಮಾಡಿ.