ಸ್ವಚ್ಛತೆ ಮತ್ತು ಆರೈಕೆ

ಶ್ರೆಡರ್ · ನಿರ್ವಹಣಾ ವಿಧಾನ

ಪ್ರತಿ ಬ್ಯಾಚ್ ನಂತರ

  1. ಆಫ್ ಮಾಡಿ ಪ್ಲಗ್ ತೆಗೆಯಿರಿ.ಬ್ಲೇಡ್‌ಗಳು ಸಂಪೂರ್ಣ ನಿಲ್ಲುವವರೆಗೆ ಕಾಯಿರಿ.
  2. ಚೂರು ಮಾಡಿದ ತ್ಯಾಜ್ಯದ ಕ್ರೇಟ್ ಹೊರತೆಗೆಯಿರಿ.
  3. ನೀರು ಹಿಡಿಯಲು ಕೆಳಗಿನ ಜಾಗದಲ್ಲಿ ಒಂದು ಬಕೆಟ್ ಇಡಿ.
  4. ಪ್ಲಗ್, ಸ್ವಿಚ್ ಮತ್ತು ಮೋಟಾರ್‌ಗೆ ನೀರು ತಾಗದಂತೆ ನೋಡಿಕೊಳ್ಳಿ.

  5. ಬ್ಲೇಡ್‌ಗಳ ಮೇಲೆ ನೀರು ಸುರಿಯಿರಿ.ಒದ್ದೆಯಿರುವಾಗಲೇ ತೊಳೆಯಿರಿ, ಆಗ ತ್ಯಾಜ್ಯ ಒಣಗಿ ಅಂಟಿಕೊಳ್ಳುವುದಿಲ್ಲ.
  6. ಅಂಟಿಕೊಂಡ ತ್ಯಾಜ್ಯವನ್ನು ಸ್ಕ್ರೇಪರ್ ಉಪಕರಣದಿಂದ ತೆಗೆಯಿರಿ.ಕೈ ಎಂದಿಗೂ ಬಳಸಬೇಡಿ. ನಿಂತಿದ್ದರೂ ಬ್ಲೇಡ್‌ಗಳು ಹರಿತವಾಗಿರುತ್ತವೆ.
  7. ಹಾಪರ್ ಮತ್ತು ಕ್ರೇಟ್ ಇಡುವ ಜಾಗವನ್ನು ಒರೆಸಿ.
  8. ಕೊಳಕು ನೀರನ್ನು ಚರಂಡಿಗೆ ಚೆಲ್ಲಿ.
  9. ನೆಲವನ್ನು ಒಣಗಿಸಿ.

ತಿಂಗಳಿಗೆ ಎರಡು ಬಾರಿ

  1. ಹೊರಭಾಗ ಮತ್ತು ಶ್ರೆಡಿಂಗ್ ಭಾಗವನ್ನು D7 Diversey ದ್ರವದಿಂದ ಸ್ವಚ್ಛಗೊಳಿಸಿ.ಮೊದಲು ಆಫ್ ಮಾಡಿ ಪ್ಲಗ್ ತೆಗೆಯಿರಿ. ಮೃದು ಬಟ್ಟೆಯಿಂದ ಒರೆಸಿ.

ನಿಯಮಿತವಾಗಿ

  1. ಸಡಿಲವಾದ ಸ್ಕ್ರೂ ಮತ್ತು ಬೋಲ್ಟ್‌ಗಳನ್ನು ನೋಡಿ.ಕಂಡರೆ ನಮಗೆ ತಿಳಿಸಿ.
  2. ವಿದ್ಯುತ್ ಕೇಬಲ್ ಎಲ್ಲಾದರೂ ಕತ್ತರಿಸಿದೆಯೇ ನೋಡಿ.ಹಾಳಾಗಿದೆಯೇ? ಯಂತ್ರ ಬಳಸಬೇಡಿ. ನಮಗೆ ಕರೆ ಮಾಡಿ.
  3. ಬ್ಲೇಡ್ ಮೊಂಡಾಗಿದೆಯೇ ಅಥವಾ ಹಾಳಾಗಿದೆಯೇ? ನಮಗೆ ಕರೆ ಮಾಡಿ. ಬ್ಲೇಡ್‌ಗಳನ್ನು ನಮ್ಮ ತಂತ್ರಜ್ಞರು ಮಾತ್ರ ಬದಲಿಸುತ್ತಾರೆ.

  4. ಸ್ವಿಚ್ ಬಾಕ್ಸ್ ಅಥವಾ ಮೋಟಾರ್ ಕವರ್ ಎಂದಿಗೂ ತೆರೆಯಬೇಡಿ. ನಮಗೆ ಕರೆ ಮಾಡಿ.

ಕಂಟ್ರೋಲ್ ಪ್ಯಾನೆಲ್ ತೆರೆಯಬೇಡಿ ಅಥವಾ ವೈರಿಂಗ್ ಮುಟ್ಟಬೇಡಿ. ವಿದ್ಯುತ್ ಆಘಾತವಾದರೆ ತಕ್ಷಣ ಮುಖ್ಯ MCB ಆಫ್ ಮಾಡಿ ನಮಗೆ ಕರೆ ಮಾಡಿ.