ಆಪರೇಟರ್ ಕಾರ್ಡ್ಶ್ರೆಡರ್ · ಸಾವಯವ ತ್ಯಾಜ್ಯ ಶ್ರೆಡರ್ (OWS)ಕನ್ನಡ · Kannada
ದಿನನಿತ್ಯದ ಬಳಕೆ
ಶ್ರೆಡರ್ · ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP)
- ತ್ಯಾಜ್ಯವನ್ನು ವಿಂಗಡಿಸಿ.ಪ್ಲಾಸ್ಟಿಕ್, ಗಾಜು, ಲೋಹ ಮತ್ತು ಆಹಾರವಲ್ಲದ ಎಲ್ಲವನ್ನೂ ತೆಗೆಯಿರಿ.
- ದೊಡ್ಡ ಅಥವಾ ಗಟ್ಟಿಯಾದ ತುಂಡುಗಳನ್ನು ಚಿಕ್ಕದು ಮಾಡಿ.ಇಡೀ ತೆಂಗಿನಕಾಯಿ, ದೊಡ್ಡ ಮೂಳೆ ಮತ್ತು ದಪ್ಪ ಕಾಂಡಗಳು ಬ್ಲೇಡ್‌ಗಳನ್ನು ಜಾಮ್ ಮಾಡಬಹುದು.
- ಹಾಪರ್‌ನ ಬದಿಯಲ್ಲಿ ನಿಲ್ಲಿ.ಅದರ ಎದುರು ಎಂದಿಗೂ ನಿಲ್ಲಬೇಡಿ.
- ಒಮ್ಮೆಗೆ ಗರಿಷ್ಠ 5 ಕೆ.ಜಿ. ಮಾತ್ರ, ಸ್ವಲ್ಪ-ಸ್ವಲ್ಪವಾಗಿ ಹಾಕಿ.ಇಡೀ ಟ್ರೇ ಒಮ್ಮೆಲೇ ಸುರಿಯಬೇಡಿ. ಹೆಚ್ಚು ಹಾಕಿದರೆ ಶ್ರೆಡರ್ ಜಾಮ್ ಆಗುತ್ತದೆ.
ಬ್ಲೇಡ್‌ಗಳು ತಿರುಗುವಾಗ ಕೈಗಳನ್ನು ಹಾಪರ್ ಒಳಗೆ ಎಂದಿಗೂ ಹಾಕಬೇಡಿ.
- ಹಾಪರ್ ಖಾಲಿಯಾಗುವವರೆಗೆ ಕಾಯಿರಿ. ನಂತರ ಮುಂದಿನ 5 ಕೆ.ಜಿ. ಹಾಕಿ.
- ಜಾಮ್ ಆಯಿತೇ? ರಿವರ್ಸ್ ಒತ್ತಿ.ನಂತರ ಮತ್ತೆ ಮುಂದಕ್ಕೆ ಚಲಾಯಿಸಿ. ಇನ್ನೂ ಸಿಕ್ಕಿದೆಯೇ? ತ್ವರಿತ ಪರಿಹಾರ ನೋಡಿ.
- ಕ್ರೇಟ್ ತುಂಬುತ್ತಾ ಬಂತೇ? ಆಫ್ ಮಾಡಿ, ನಂತರ ಬದಲಿಸಿ.ತುಂಬಿ ಚೆಲ್ಲಲು ಬಿಡಬೇಡಿ.
- ಮುಗಿದ ಮೇಲೆ ಆಫ್ ಮಾಡಿ.ಬ್ಲೇಡ್‌ಗಳು ಸಂಪೂರ್ಣ ನಿಲ್ಲುವವರೆಗೆ ಕಾಯಿರಿ.
- ಚೂರು ಮಾಡಿದ ತ್ಯಾಜ್ಯವನ್ನು ಕಾಂಪೋಸ್ಟರ್‌ಗೆ ತೆಗೆದುಕೊಂಡು ಹೋಗಿ.
- ಈಗಲೇ, ಒದ್ದೆಯಿರುವಾಗಲೇ ಬ್ಲೇಡ್‌ಗಳನ್ನು ತೊಳೆಯಿರಿ.ಸ್ವಚ್ಛತೆ ಮತ್ತು ಆರೈಕೆ ನೋಡಿ.
ಏನು ಹಾಕಬೇಕು
ಹಾಕಿ
- ಎಲ್ಲಾ ಆಹಾರ ತ್ಯಾಜ್ಯಹಣ್ಣು, ತರಕಾರಿ, ಮಾಂಸ, ಕೋಳಿ, ಮೀನು, ಚಿಪ್ಪುಗಳು, ಮೂಳೆಗಳು, ಪಾಸ್ತಾ, ಬೇಕರಿ ಪದಾರ್ಥಗಳು, ಚೀಸ್ ಮತ್ತು ಮೊಟ್ಟೆ ಸಿಪ್ಪೆ.
- ಆಹಾರ ಅಂಟಿದ ಕಾಗದನ್ಯಾಪ್ಕಿನ್, ಪೇಪರ್ ಟವೆಲ್, ಟೀ ಬ್ಯಾಗ್ ಮತ್ತು ಕಾಫಿ ಪುಡಿ.
- ಸಸ್ಯಗಳುಹೂವುಗಳು, ಎಲೆಗಳು, ಹುಲ್ಲು ಮತ್ತು ಸಣ್ಣ ಕೊಂಬೆಗಳು.
- ಪ್ರಮಾಣೀಕೃತ ಕಾಂಪೋಸ್ಟ್ ಆಗುವ ವಸ್ತುಗಳುಕಾಂಪೋಸ್ಟ್ ಆಗುವ ಚೀಲಗಳು (ASTM D6400), ಮರದ ಕಡ್ಡಿಗಳು ಮತ್ತು ಚಾಪ್‌ಸ್ಟಿಕ್‌ಗಳು.
ಹಾಕಬೇಡಿ
- ದ್ರವಗಳು, ಗ್ರೀಸ್ ಮತ್ತು ಅಡುಗೆ ಎಣ್ಣೆ
- ಪ್ಲಾಸ್ಟಿಕ್, ಥರ್ಮಾಕೋಲ್, ಪಾರ್ಸೆಲ್ ಡಬ್ಬಿಗಳು ಮತ್ತು ಬಳಸಿ ಎಸೆಯುವ ಕಪ್‌ಗಳು
- ಗಾಜು ಮತ್ತು ಲೋಹ
- ಮೇಣದ ಕಾಗದ ಮತ್ತು ಮೇಣ ಲೇಪಿತ ರಟ್ಟು
- ರಬ್ಬರ್ ಬ್ಯಾಂಡ್, ತಂತಿ ಕಟ್ಟು ಮತ್ತು ಸ್ಟಿಕ್ಕರ್‌ಗಳು
- ಡಯಾಪರ್‌ಗಳು
- ಪ್ರಮಾಣೀಕೃತವಲ್ಲದ 'ಜೈವಿಕ ವಿಘಟನೀಯ' ವಸ್ತುಗಳು
ಕಂಟ್ರೋಲ್ ಪ್ಯಾನೆಲ್ ತೆರೆಯಬೇಡಿ ಅಥವಾ ವೈರಿಂಗ್ ಮುಟ್ಟಬೇಡಿ. ವಿದ್ಯುತ್ ಆಘಾತವಾದರೆ ತಕ್ಷಣ ಮುಖ್ಯ MCB ಆಫ್ ಮಾಡಿ ನಮಗೆ ಕರೆ ಮಾಡಿ.